Untitled Document
Sign Up | Login    
Dynamic website and Portals
  

Related News

ಪಶ್ಚಿಮ ಬಂಗಾಳ ಚುನಾವಣೆ: ಕಚ್ಚಾ ಬಾಂಬ್ ಸ್ಫೋಟಗೊಂಡು ವ್ಯಕ್ತಿ ಸಾವು

ಪಶ್ಚಿಮ ಬಂಗಾಳದ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನದ ವೇಳೆ ಬಾಂಬ್ ಸ್ಫೋಟಗೊಂಡಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮುರ್ಷಿದಾಬಾದ್ ನಲ್ಲಿ ಮತದಾನ ನಡೆಯುತ್ತಿದ್ದ ವೇಳೆ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು ಸಿಪಿಐ-ಎಂ ಕಾರ್ಯಕರ್ತ ಮತದಾನದ ಏಜೆಂಟ್ 30 ವರ್ಷದ ತಹಿದುಲ್...

ಅಭಿಷೇಕ್ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ

ಪಶ್ಚಿಮಬಂಗಾಳ ಸರ್ಕಾರದ ಆಡಳಿತವನ್ನು ಯಾರಾದರು ಪ್ರಶ್ನಿಸಿದರೆ ಅಂತಹವರ ಕಣ್ಣನ್ನು ಕಿತ್ತುಹಾಕುವುದಲ್ಲದೇ, ಕೈಗಳನ್ನು ಕತ್ತರಿಸಿ ಹಾಕುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿರುವ ಅಭಿಷೇಕ್, ದೇಶದ ಬಹುತೇಕ ರಾಜಕೀಯ ಪಕ್ಷಗಳು ಪ್ರಧಾನಿ...

ಭೂಸ್ವಾಧೀನ ಕಾಯ್ದೆಗೆ ಬೆಂಬಲವಿಲ್ಲ: ಮಮತಾ ಬ್ಯಾನರ್ಜಿ ಪುನರುಚ್ಚಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಯ್ದೆಗೆ ಬೆಂಬಲ ನೀಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಭೂಸ್ವಾಧೀನ ಕಾಯ್ದೆ ಸಂಬಂಧ ನಮ್ಮ ನಿಲುವನ್ನು ಸಂಸತ್ ನಲ್ಲಿಯೇ ಸ್ಪಷ್ಟಪಡಿಸಿದ್ದೇವೆ,...

ದೆಹಲಿ ಫಲಿತಾಂಶದಿಂದ ದ್ವೇಷ ರಾಜಕಾರಣಕ್ಕೆ ಬಹುದೊಡ್ಡ ಹಿನ್ನಡೆ: ಮಮತಾ ಬ್ಯಾನರ್ಜಿ

'ದೆಹಲಿ' ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ವಿಜಯಗಳಿಸಿರುವುದು ದ್ವೇಷ ರಾಜರಾಕರಣದಲ್ಲಿ ತೊಡಗಿದ್ದ ಶಕ್ತಿಗಳಿಗೆ ದೊಡ್ಡ ಹಿನ್ನಡೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ...

ದೆಹಲಿ, ಬಿಹಾರದ ನಂತರ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಮಾಡುತ್ತೇವೆ: ಅಮಿತ್ ಶಾ

'ಪಶ್ಚಿಮ ಬಂಗಾಳ'ಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದು, ರಾಜ್ಯದಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ತಿಳಿಸಿದ್ದಾರೆ. ಬುರ್ದ್ವಾನ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ...

ಶಾರದಾ ಚಿಟ್‌ ಫಂಡ್ ಹಗರಣ: ಮುಕುಲ್ ರಾಯ್‌ಗೆ ಸಮನ್ಸ್ ಜಾರಿ

ಬಹುಕೋಟಿ ಶಾರದಾ ಚಿಟ್‌ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಟಿಎಂಸಿ ನಾಯಕ ಮುಕುಲ್ ರಾಯ್‌ಗೆ ಸಮನ್ಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಟಿಎಂಸಿ ನಾಯಕರನ್ನು ಬಂಧಿಸಿರುವ ಸಿಬಿಐ ಇದೀಗ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್‌ಗೆ ವಿಚಾರಣೆಗೆ ಹಾಜರಾಗುವಂತೆ...

ಮರುಮತಾಂತರದ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ: ಕಾಂಗ್ರೆಸ್

'ಉತ್ತರ ಪ್ರದೇಶ'ದ ಆಗ್ರಾದಲ್ಲಿ ನಡೆದ ಮರುಮತಾಂತರದ ವಿಷಯದ ಬಗ್ಗೆ ಸಂಸತ್ ನಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಗದ್ದಲ ಮುಂದುವರೆಸಿವೆ. ಮರುಮತಾಂತರದ ಬಗ್ಗೆ ಕೋಲಾಹಲ ಸೃಷ್ಠಿಸಿರುವ ಸಂಸತ್ ಸದಸ್ಯರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ....

ಸಾಧ್ವಿ ನಿರಂಜನ ಜ್ಯೋತಿ ರಾಜಿನಾಮೆಗೆ ವಿಪಕ್ಷಗಳ ಆಗ್ರಹ

ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆಯನ್ನು ಪ್ರತಿಭಟಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ. ಪ್ರಶ್ನೋತ್ತರ ವೇಳೆ ಆರಂಭವಾದಾಕ್ಷಣ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಾಧ್ವಿ ನಿರಂಜನ ಜ್ಯೋತಿ ಹೇಳಿಕೆ ಬಗ್ಗೆ...

ಬಿಜೆಪಿ ಭಾರತೀಯ ಜೋಕರ್ ಪಾರ್ಟಿ: ಅಭಿಷೇಕ್ ಬ್ಯಾನರ್ಜಿ

ಬಿಜೆಪಿ ಭಾರತೀಯ ಜೋಕರ್ ಪಕ್ಷ ಎಂದು ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ. ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿ, ಬಿಜೆಪಿ ನಾಯಕರು ದಿನದಲ್ಲಿ ಐದು ಬಾರಿ ಬಟ್ಟೆ ಬದಲಿಸುತ್ತಾರೆ, ಹಾಗಾಗಿ,...

ಕಪ್ಪುಹಣ ಕುರಿತು ಚರ್ಚೆಗೆ ಒತ್ತಾಯ: ಟಿಎಂಸಿ, ಜೆಡಿಯು ಪ್ರತಿಭಟನೆ

ಕಪ್ಪುಹಣದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಟಿಎಂಸಿ ಸದಸ್ಯರು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಸಂಸತ್‌ನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಹಲವು ವಿಘ್ನಗಳು ಎದುರಾಗಿವೆ. ಪ್ರಮುಖ ವಿಷಯಗಳಾದ ಕಪ್ಪುಹಣ, ಸಿಬಿಐ...

ಶಾರದಾ ಚಿಟ್ ಫಂಡ್ ಹಗರಣ: ಟಿಎಂಸಿ ಸಂಸದನ ಬಂಧನ

ಬಹುಕೋಟಿ ಶಾರದಾ ಚಿಟ್‌ ಫ‌ಂಡ್‌ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಹಗರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಶೃಂಜೋಯ್‌ ಬೋಸ್‌ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಶೃಂಜೋಯ್‌ ಬೋಸ್‌ ರನ್ನು 5 ತಾಸುಗಳ ಸುದೀರ್ಘ‌ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದೇ...

ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ: ಉಗ್ರರು ಬಲಿ

ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟಗೊಂಡು ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬರ್ದ್ವಾನ್ ನಲ್ಲಿ ನಡೆದಿದೆ. ಇಲ್ಲಿನ ಖಗ್ರಗರ್ ನ ಮನೆಯೊಂದರಲ್ಲಿ ಶಂಕಿತ ಉಗ್ರರು ಬಾಂಬ್ ತಯಾರಿಸುತ್ತಿದ್ದರು. ಈ ವೇಳೆ ಘಟನೆ ಸಂಬಂವಿಸಿದೆ. ಈ ಮನೆ ತೃಣಮೂಲ...

ಶಾರದಾ ಚಿಟ್ ಫಂಡ್ ಹಗರಣ: ಪಶ್ಚಿಮ ಬಂಗಾಳ ನಿವೃತ್ತ ಡಿಐಜಿ ಬಂಧನ

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸೆ.9ರಂದು ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳದ ನಿವೃತ್ತ ಡಿ.ಐ.ಜಿ ರಜತ್ ಮಜುಂದಾರ್ ಅವರನ್ನು ಬಂಧಿಸಿದ್ದಾರೆ. ಶಾರದಾ ಚಿಟ್ ಫಂಡ್ ಸಂಸ್ಥೆಗೆ ರಜತ್ ಮಜುಂದಾರ್ ಅವರು ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ...

ಬಿಜೆಪಿಯನ್ನು ದೂರವಿಡಲು ಸಿ.ಪಿ.ಐ ನೊಂದಿಗೆ ಮಾತುಕತೆಗೂ ಸಿದ್ದ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ದೂರವಿಡಲು ಸಿ.ಪಿ.ಐ(ಎಂ) ನೊಂದಿಗೆ ಮಾತುಕತೆ ನಡೆಸುವುದಕ್ಕೂ ಸಿದ್ಧವಿರುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಮಾವೋವಾದಿಗಳೊಂದಿಗೆ ಕೈಜೋಡಿಸಿದ್ದು ಬಂಗಾಳದ ಜಂಗಲ್ ಮಹಲ್ ಪ್ರದೇಶದಲ್ಲಿ ಭಯೋತ್ಪಾದಕರ ಆಳ್ವಿಕೆಯನ್ನು ತರಲು ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಖಾಸಗಿವಾಹಿನಿಯೊಂದಕ್ಕೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited